Tuesday, September 02, 2014


ನುಡಿ ನಿದಾನ ಸರಣಿ–3

ನಿಮ್ಮ ಧ್ವನಿಬಿಂಬ ಹೇಗೆ?ಮಾತುಗಾರಿಕೆಯೇ ತಮ್ಮ ವೃತ್ತಿಯ ಒಂದು ಅಗತ್ಯ ಕೌಶಲವಾಗಿರುವ ವ್ಯಕ್ತಿಗಳಿಗೆ ಅದಕ್ಕೆ ಪೂರಕವಾಗಿ ತಮ್ಮ ಧ್ವನಿಯೂ ಇರಬೇಕು. ಕಣ್ಣುಮುಚ್ಚಿಕೊಂಡು ಧ್ವನಿಯೊಂದನ್ನು ಕೇಳಿದಾಗ ಆ ಕುರಿತು ನಮಗೆ ಒಂದು ಕಲ್ಪನೆ ಮೂಡಬೇಕು; ಮೂಡುತ್ತದೆ.
ಇನ್ನು ಕಣ್ಣು ತೆರೆದೇ, ಮಾತನಾಡುವ ವ್ಯಕ್ತಿಯನ್ನು ನೋಡುತ್ತಿದ್ದರೆ, ಧ್ವನಿಯನ್ನು ಆಧಾರವಾಗಿಸಿಕೊಂಡು ಆ ವ್ಯಕ್ತಿಯ ಕುರಿತು ನಮ್ಮ ಅಭಿಪ್ರಾಯವನ್ನು ರೂಪಿಸಿಕೊಳ್ಳುತ್ತೇವೆ. ಹೀಗಾಗಿ, ವೇದಿಕೆಯಲ್ಲಾಗಲೀ, ಮಾಧ್ಯಮಗಳಲ್ಲಾಗಲೀ ಅಥವಾ ಇತರರೊಂದಿಗಿನ ನಮ್ಮ ದೈನಂದಿನ ವ್ಯವಹಾರಗಳಲ್ಲಾಗಲೀ ನಾವಾಡುವ ಮೊದಲ ಮಾತು ಮತ್ತು ಅದರ ಧ್ವನಿಯ ಗುಣ, ಆ ಸನ್ನಿವೇಶದ ಮೇಲೆ ನಾವು ಸಾಧಿಸಬಹುದಾದ ಹಿಡಿತದ ಕುರಿತು ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಇದೇ ನಮ್ಮ ‘ಧ್ವನಿಬಿಂಬ’ / ‘ಧ್ವನಿಚಿತ್ರ’ ದ ಮಹತ್ವ.
ಕೇಳುಗರು ನಾವು ಬಳಸುವ ಭಾಷೆಯ ಮೂಲಕ ಗ್ರಹಿಸುವ ಮಾಹಿತಿ ಕೇವಲ ಶೇಕಡಾ 7 ರಷ್ಟು ಮಾತ್ರ ಎನ್ನುತ್ತದೆ ಒಂದು ಅಧ್ಯಯನ. ಉಳಿದ ಭಾಗದ ಅರ್ಥವನ್ನು ಅವರು ನಮ್ಮ ಧ್ವನಿಯ ಗುಣ, ಶ್ರುತಿ, ಮಾತಿನಲ್ಲಿನ ‘ಕಾಕು’ ಮತ್ತು ನಮ್ಮ ಆಂಗಿಕ ಹಾವಭಾವಗಳಿಂದ ಗ್ರಹಿಸುತ್ತಾರೆ. ನಮ್ಮ ಧ್ವನಿ ಕೀರಲಾಗಿಯೋ, ಮೂಗಿನಿಂದ ಹೊರಡುವಂತಿದ್ದೋ, ಏರಿಳಿತಗಳಿಲ್ಲದೆ ಏಕಶ್ರುತಿಯಲ್ಲಿದ್ದೋ, ಕರ್ಕಶವಾಗಿದ್ದೋ ಇಲ್ಲವೇ ಶಕ್ತಿಹೀನವಾಗಿಯೋ ಇದ್ದಲ್ಲಿ, ಕೇಳುಗರು ಬಹಳ ಬೇಗ ನಾವಾಡುತ್ತಿರುವ ಮಾತಿನ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.
ವ್ಯಕ್ತಿಯೊಬ್ಬನ ‘ಧ್ವನಿಬಿಂಬ’ ನಿರ್ಧಾರಿತವಾಗುವುದು:
1. ಧ್ವನಿಯ ‘ಗುಣ’ ಮತ್ತು ‘ಚೈತನ್ಯ’ಗಳಿಂದ
2. ಆಡುವ ಮಾತಿನಲ್ಲಿನ ಏರಿಳಿತಗಳಿಂದ ಉಂಟಾಗುವ ‘ಕಾಕು’ವಿನಿಂದ
3. ಅವನ ಮಾತಿನ ‘ವೇಗ’ ಮತ್ತು ‘ಲಯ’ಗಳಿಂದ
4. ಉಚ್ಚಾರಣೆಯಿಂದ
5. ಧ್ವನಿ ಎಷ್ಟು ‘ಸಣ್ಣ’ (soft) ಅಥವಾ ಎಷ್ಟು ‘ದೊಡ್ಡ’ದಿದೆ (loud) ಎನ್ನುವುದರಿಂದ
6. ಧ್ವನಿಯ ಸ್ಥಾಯಿ ‘ತಾರ’ವೋ (high pitch) ಅಥವಾ ‘ಮಂದ್ರ’ವೋ (low pitch) ಎನ್ನುವುದರಿಂದ
ಈ ಧ್ವನಿಬಿಂಬವನ್ನೇ ಆಧರಿಸಿ ಕೇಳುಗರು ವ್ಯಕ್ತಿಯ ಮಾತು ಕೇಳುವುದನ್ನು ಮುಂದುವರೆಸಬೇಕೋ ಬೇಡವೋ ಎನ್ನುವುದನ್ನು ಆತ ಮಾತನಾಡಲು ಪ್ರಾರಂಭಿಸಿದ ಮೊದಲ ಕೆಲವು ಕ್ಷಣಗಳಲ್ಲೇ ನಿರ್ಧರಿಸುತ್ತಾರೆ. ವ್ಯಕ್ತಿಯ ಧ್ವನಿಯೇ ಆತ ಯಾರು, ಏನು ಹೇಳಬೇಕೆಂದಿದ್ದಾನೆ ಎನ್ನುವ ಕುರಿತು ಪ್ರಭಾವಶಾಲಿ ಸಂದೇಶವನ್ನು ಕೇಳುಗರಿಗೆ ರವಾನಿಸುತ್ತದೆ. ವ್ಯಕ್ತಿಯ ಮಾತುಗಳನ್ನು ಆಲಿಸುವಾಗ ಕೇಳುಗರ ಒಳಪ್ರ್ರಜ್ಞೆ ಅವನ ಧ್ವನಿ ಮತ್ತು ಆಂಗಿಕ ಚಲನೆಗಳಿಂದ ಸಂದೇಶಗಳನ್ನು ಗ್ರಹಿಸುತ್ತದೆ.
ನಮ್ಮ ಸಹಜ ಪ್ರವೃತ್ತಿ, ನಿಲುವು, ವರ್ತನೆಗಳು, ಮತ್ತು ಅಭಿವ್ಯಕ್ತಿಗಳು (stance, mannerisms, expressions) ನಮ್ಮ ದೈಹಿಕ ಅಸ್ತಿತ್ವದ ಅವಿಭಾಜ್ಯ ಅಂಗಗಳು ಮಾತ್ರವೇ ಆಗಿರದೆ ನಮ್ಮ ಧ್ವನಿಯ ಮೇಲೂ ಪ್ರಭಾವ ಬೀರುತ್ತವೆ ಎನ್ನುವುದು ವೈಜ್ಞಾನಿಕ ಸತ್ಯ. ನಾವು ನಮ್ಮ ಈವರೆಗಿನ ಬದುಕಿನಲ್ಲಿ ರೂಪಿಸಿಕೊಂಡಿರುವ ಧ್ವನಿಯ, ಮಾತಿನ ಮತ್ತು ದೈಹಿಕ ರೂಢಿಗಳು (ಇತರರಿಗೆ ಆಸಕ್ತಿ ಮೂಡಿಸುವಂತಿರಲಿ ಅಥವಾ ಇಲ್ಲದಿರಲಿ) ನಮ್ಮ ಸದ್ಯದ ‘ಧ್ವನಿಬಿಂಬ’ವನ್ನು ರೂಪಿಸುವ ಅಂಗಗಳು.
ನಮ್ಮ ‘ಧ್ವನಿಬಿಂಬ’ವನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಿದೆಯೇ? ಎಂದು ಕೇಳುವುದಾದರೆ ಉತ್ತರ - ಹೌದು, ಸಾಧ್ಯವಿದೆ. ಇಂದಿಗೂ ಬಹಳ ಜನ ತಮ್ಮ ಧ್ವನಿಯ ಗುಣ ಹುಟ್ಟಿನೊಂದಿಗೇ ಬಂದಿರುವುದರಿಂದ ಅದನ್ನು ಉತ್ತಮಪಡಿಸಿಕೊಳ್ಳಲಾಗುವುದಿಲ್ಲ ಎಂದೇ ತಿಳಿದಿದ್ದಾರೆ. ಇನ್ನು ಹಲವರಿಗೆ ತಮ್ಮ ‘ಧ್ವನಿಬಿಂಬ’ದ ಕಲ್ಪನೆ, ಮಹತ್ವಗಳೇ ತಿಳಿದಿಲ್ಲ. ಪ್ರತಿಯೊಬ್ಬರೂ ಒಂದು ಯಶಸ್ವೀ ‘ಧ್ವನಿಬಿಂಬ’ವನ್ನು ರೂಢಿಸಿಕೊಳ್ಳುವುದರ ಮೂಲಕ ತಾವು ಬಯಸುವಂಥ ಒಂದು ಸಮರ್ಥ ಮತ್ತು ವೃತ್ತಿಪರ ವ್ಯಕ್ತಿತ್ವವನ್ನು ತೋರ್ಪಡಿಸಲು ಸಾಧ್ಯವಿದೆ ಎನ್ನುವುದನ್ನು ಮನಗಾಣಬೇಕು.
ನಮಗೆ ಉತ್ತಮ ‘ಧ್ವನಿಬಿಂಬ’ದ ಅಗತ್ಯ ಏಕಿದ್ದೀತು ಎನ್ನುವುದು ಈ ಸಂದರ್ಭದಲ್ಲಿ ಸಹಜವಾಗಿಯೇ ಮೂಡುವ ಪ್ರಶ್ನೆ. ಅದನ್ನು ಹೀಗೆ ಉತ್ತರಿಸಬಹುದು:
1. ಅಭ್ಯರ್ಥಿಯಾಗಿ  ವೃತ್ತಿಪರ ಸಂದರ್ಶನಗಳನ್ನು ಎದುರಿಸುವಾಗ
2. ಸಾರ್ವಜನಿಕ ವೇದಿಕೆಗಳಲ್ಲಿ ಭಾಷಣ ಮಾಡುವ ಸಂದರ್ಭಗಳಲ್ಲಿ
3. ವಿವಿಧ ವೇದಿಕೆಗಳಲ್ಲಿ ವ್ಯಕ್ತಿ ತನ್ನ ಸಂಸ್ಥೆಯನ್ನು ಪ್ರತಿನಿಧಿಸಲು ಮಾತನಾಡುವಾಗ
4. ರೇಡಿಯೋ / ಟೆಲಿವಿಷನ್‌ಗಳಲ್ಲಿ ತಜ್ಞರಾಗಿ/ಅತಿಥಿಗಳಾಗಿ ಭಾಗವಹಿಸಬೇಕಾದಾಗ
5. ಅತ್ಯಂತ ಕಡಿಮೆ ಅವಧಿಯಲ್ಲಿ ಕೇಳುಗ / ಗ್ರಾಹಕರನ್ನು ಪ್ರಭಾವಿಸಲು (ಮಾರ್ಕೆಟಿಂಗ್ ಸನ್ನಿವೇಶಗಳಲ್ಲಿ)
ಮೇಲಿನ ಸಂದರ್ಭಗಳಲ್ಲಿ ಉತ್ತಮ ‘ಧ್ವನಿಬಿಂಬ’ ಹೊಂದಿರುವವರೇ ಮೇಲುಗೈ ಸಾಧಿಸುತ್ತಾರೆ ಎನ್ನುವುದು ಅನುಭವಸಿದ್ಧವಾದ ಮಾತು. ಇಂಥವಕ್ಕೆಲ್ಲ, ಒಂದು ‘ಆದರ್ಶ ಧ್ವನಿಬಿಂಬ’ (ideal voice image) ಇದೆಯೇ ಎಂದರೆ ಇಲ್ಲ ಎಂದೇ ಉತ್ತರಿಸಬೇಕಾದೀತು. ಹಾಗಾದರೆ ಉತ್ತಮ ‘ಧ್ವನಿಬಿಂಬ’ವೆಂದರೆ ಯಾವುದು?
ಯಾವ ಧ್ವನಿಬಿಂಬ ನಮ್ಮ ವೈಯಕ್ತಿಕ ಅಗತ್ಯಗಳನ್ನು ಸಮರ್ಥವಾಗಿ ಪೂರೈಸುತ್ತದೆಯೋ ಅದುವೇ ನಮ್ಮ ಮಟ್ಟಿಗೆ ಉತ್ತಮ. ಅದು ನಮ್ಮ ನಂಬಿಕೆಗಳು, ಆದರ್ಶಗಳು, ಭಾವನೆಗಳು ಮತ್ತು ಚಿಂತನೆಗಳನ್ನು ಪ್ರತಿಬಿಂಬಿಸುತ್ತದೆ. ಯಶಸ್ವೀ ಧ್ವನಿಯೆನ್ನುವುದು ನಮ್ಮ ವ್ಯಕ್ತಿತ್ವದೊಂದಿಗೆ ಮತ್ತು ನಾವು ತಲುಪಿಸಬೇಕಾಗಿರುವ ಸಂದೇಶದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತದೆ. ನಾವೆಲ್ಲರೂ ನಮ್ಮ ಕಾರ್ಯಕ್ಷೇತ್ರದ ಕುರಿತಾಗಿ ಬೇಕಾದ ಜ್ಞಾನ ಮತ್ತು ಸಾಮರ್ಥ್ಯಗಳನ್ನು ಗಳಿಸಿಕೊಳ್ಳಲು ಇಡೀ ಜೀವಮಾನವನ್ನೇ ವ್ಯಯ ಮಾಡುತ್ತೇವೆ. ಅದರೊಂದಿಗೇ, ಇತರರಿಗೆ ನಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ತಿಳಿಸಲು ಉತ್ತಮ ಧ್ವನಿಬಿಂಬವನ್ನು ಬಳಸಿಕೊಳ್ಳುವುದನ್ನೂ ಕಲಿಯಬೇಕು.
ಹಾಗಾದರೆ, ಉತ್ತಮ ಧ್ವನಿಯನ್ನು ಗುರುತಿಸುವುದು ಹೇಗೆ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆಯಲ್ಲವೇ? ಇದಕ್ಕೆ ಉತ್ತರವನ್ನು ಧ್ವನಿತಜ್ಞರು ಇಂಗ್ಲಿಷಿನ ಎನ್ನುವ ಪದದ ಅಕ್ಷರಗಳ ಮೂಲಕವೇ ಸೃಜನಾತ್ಮಕವಾಗಿ ಸಂಕ್ಷೇಪಿಸಿ ಸೂಚಿಸಿದ್ದಾರೆ.
V – Vibrant – ಜೀವಂತಿಕೆ
O – Open – ಮುಕ್ತ
I – Intentional – ಉದ್ದೇಶಪೂರ್ವಕ
C – Conversational – ಸಂಭಾಷಣಾತ್ಮಕ
E – Emotionally Expressive – ಭಾವನಾತ್ಮಕ ಅಭಿವ್ಯಕ್ತಿ
ಮಾತನಾಡುವ ವ್ಯಕ್ತಿಯ ಧ್ವನಿಯಲ್ಲಿನ ‘ಜೀವಂತಿಕೆ’, ಆ ವ್ಯಕ್ತಿ ಆ ಕ್ಷಣದಲ್ಲಿ ಕೇಳುಗರೊಂದಿಗೆ ಜೀವಂತನಾಗಿ, ಸಕ್ರಿಯನಾಗಿ ಇದ್ದಾನೆ ಎನ್ನುವ ಅನುಭವ ನೀಡುತ್ತದೆ. ಇದರಿಂದಾಗಿ ಆಡಿದ ಮಾತು ಕೇಳುಗರ ಮೇಲೆ ಅತಿ ಹೆಚ್ಚು ಪರಿಣಾಮವನ್ನು ಬೀರಲು ಸಾಧ್ಯವಾಗುತ್ತದೆ.
ಧ್ವನಿಯಲ್ಲಿನ ‘ಮುಕ್ತ’ ಗುಣ ಎಂದರೆ, ಕೇಳುವವರಿಗೆ ಮಾತನಾಡುತ್ತಿರುವ ವ್ಯಕ್ತಿ ಗುಟ್ಟುಮಾಡುತ್ತಿಲ್ಲ ಎನ್ನುವ ಭಾವನೆ ಬರುವಂಥ ‘ಪಾರದರ್ಶಕ’ ಅನುಭವವಾಗುವಂತಹುದು. ಜೊತೆಗೆ, ಕೇಳುಗರೊಂದಿಗಿನ ‘ಪ್ರತಿಸ್ಪಂದನೆ’ಯೂ ಅವರಿಗೆ ‘ಮುಕ್ತ’ ಗುಣದ ಅನುಭವವನ್ನು ನೀಡುತ್ತದೆ. ಯಶಸ್ವಿಯಾಗಿ ಮಾತನಾಡಲು ಬಯಸುವವರೆಲ್ಲ ಮೊದಲಿಗೆ ಉತ್ತಮ ಕೇಳುಗರಾಗಬೇಕು ಎನ್ನುವುದು ಪ್ರಸಿದ್ಧವಾದ ಹೇಳಿಕೆ. ಕೇಳುಗರೊಂದಿಗಿನ ‘ಪ್ರತಿಸ್ಪಂದನೆ’ಯಿಂದಾಗಿ ಮಾತನಾಡುವ ವ್ಯಕ್ತಿಗೆ ಅವರೊಂದಿಗೆ ಸಂಬಂಧ ಏರ್ಪಡಿಸಿಕೊಳ್ಳಲು ಸಾಧ್ಯವಾಗಿ ಸಂವಹನ ಕ್ರಿಯೆ ಸಾರ್ಥಕವಾಗುತ್ತದೆ.  ನಮ್ಮ ‘ಉದ್ದೇಶ’ ಸ್ಪಷ್ಟವಾಗಿದ್ದರೆ, ಅದೇ ನಾವಾಡುವ ಮಾತಿಗೆ ಮತ್ತು ಅದರ ಅಭಿವ್ಯಕ್ತಿಗೆ ಮಾರ್ಗದರ್ಶಕವಾಗುತ್ತದೆ ಜೊತೆಗೆ, ಕೇಳುಗರು ನಮ್ಮ ಮಾತಿನ ಅರ್ಥವನ್ನು ಗ್ರಹಿಸುವುದೂ ಸುಲಭವಾಗುತ್ತದೆ.
ನಾವಾಡುವ ಪ್ರತಿ ಮಾತನ್ನೂ ಭಾಷಣದ ರೀತಿಗಿಂತಲೂ ಸಂಭಾಷಣೆಯ ರೂಪದಲ್ಲಿ ಪ್ರಸ್ತುತಪಡಿಸುವ ಪ್ರಯತ್ನ ಮಾಡಿದರೆ, ಸಂವಹನ ಕ್ರಿಯೆಯಲ್ಲಿ ನಮಗೆ ದೊರೆಯುವ ಯಶಸ್ಸು ದೊಡ್ಡ ಪ್ರಮಾಣದ್ದು. ನಮ್ಮ ಮಾತಿನಲ್ಲಿನ ‘ಭಾವನಾತ್ಮಕ ಅಭಿವ್ಯಕ್ತಿ’ಯ ಗುಣ ಬಹಳ ಮುಖ್ಯ. ಕಥೆ ಹೇಳುವ ಶೈಲಿ ಮಾತಿಗೆ ಮೆರುಗು ನೀಡುತ್ತದೆ. ನಮ್ಮೊಳಗಿನ ಸಕಾರಾತ್ಮಕ ಭಾವನೆಗಳನ್ನು ಮುಗುಳ್ನಗೆಯ ಮೂಲಕ ನಮ್ಮ ಕಣ್ಣು ಮತ್ತು ಧ್ವನಿಗಳಲ್ಲಿ ತುಂಬಿದರೆ, ಧ್ವನಿಗೆ ಆರ್ದ್ರತೆ, ಆಪ್ತತೆಗಳು ಒದಗಿಬರುತ್ತವೆ. ಇದರಿಂದ ಧ್ವನಿಯಲ್ಲಿ ಸಂತಸದ, ಹಂಚಿಕೊಳ್ಳುವ ಮತ್ತು ಪರಸ್ಪರ ನಂಬಿಕೆಯ ಭಾವಗಳು ಮೂಡಿಬರುತ್ತವೆ.
ಇದನ್ನು ರೂಢಿಸಿಕೊಳ್ಳಲು ನಾವು ಪುಟಾಣಿ ಮಕ್ಕಳೊಂದಿಗೆ , ನಮ್ಮ ಮುದ್ದಿನ ಪ್ರಾಣಿಯೊಂದಿಗೆ ಮಾತನಾಡುವ ಸಂದರ್ಭವನ್ನು ನೆನಪಿಸಿಕೊಂಡು ಪ್ರೇರಣೆಯನ್ನು ಪಡೆಯಬಹುದು. ಈ ಎಲ್ಲವುಗಳ ಹಿನ್ನೆಲೆಯಲ್ಲಿ, ಧ್ವನಿ ಎನ್ನುವುದು ಕೇವಲ ನಮ್ಮ ಗಂಟಲು ಹೊರಡಿಸುವ ಶಬ್ದವಲ್ಲ; ಬದಲು, ನಮ್ಮ ಸಂಪೂರ್ಣ ವ್ಯಕ್ತಿತ್ವದ ಶಬ್ದಬಿಂಬ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕು. ‘ಬಾಯಿಬಿಟ್ಟರೆ ಬಣ್ಣಗೇಡು’ ಎನ್ನುವಂತಾಗದಿರಲು ನಾವೆಲ್ಲರೂ ನಮ್ಮ ವೈಯಕ್ತಿಕ ಧ್ವನಿಬಿಂಬದ ಕುರಿತು ಆಲೋಚಿಸಿ ರೂಪಿಸಿಕೊಳ್ಳಲು ಕಾರ್ಯಪ್ರವೃತ್ತರಾಗಬೇಕು. ಮಾತು ಮತ್ತು ಧ್ವನಿಗೆ ಸಂಬಂಧಿಸಿದ ವೃತ್ತಿಯಲ್ಲಿ ಇರುವವರಂತೂ ಈ ಬಗ್ಗೆ ಹೆಚ್ಚು ಶ್ರದ್ಧೆವಹಿಸುವುದು ಸೂಕ್ತ.

(ಕೃಪೆ ಪ್ರಜಾವಾಣಿ)
ನುಡಿ ನಿದಾನ ಸರಣಿ–2

ನಿಮ್ಮ ದನಿ ಹೇಗೆ?

ವೇದಿಕೆಯ ಕಾರ್ಯಕ್ರಮವೊಂದರಲ್ಲಿ ಮೈಕಿನ ಮುಂದೆ ಮಾತನಾಡಲು ಬಂದುನಿಂತ ವ್ಯಕ್ತಿ ಆಜಾನುಬಾಹು, ದೃಢಕಾಯದವನು. ಅವನ ಮೈಕಟ್ಟಿಗೆ ಸರಿಯಾಗಿ ‘ಮೇಘಗಂಭೀರ’ ಧ್ವನಿಯನ್ನು ನಿರೀಕ್ಷಿಸುತ್ತ ಕುಳಿತಿದ್ದವರೆಲ್ಲರಿಗೂ ಆತ ಮಾತನಾಡಲು ಪ್ರಾರಂಭಿಸಿದಾಗ ಮೂಡಿಬಂದ ‘ಕೀರಲು ಧ್ವನಿ’ ಕೇಳಿ ಒಂದು ಸಣ್ಣ ಆಘಾತವಾಗುತ್ತದೆ.
ಕಣ್ಣೆದುರಿನ ದೇಹದ ಗಾತ್ರಕ್ಕೂ, ಕಿವಿಯಲ್ಲಿ ಕೇಳುವ ಧ್ವನಿಗೂ ಸಂಬಂಧ ಕಲ್ಪಿಸಿಕೊಳ್ಳಲಾಗದೆ ಕುಳಿತವರೆಲ್ಲ ಒಂದು ಕ್ಷಣ ವಿಚಲಿತರಾಗುತ್ತಾರೆ. ಈ ಅಸಮಂಜಸ ರೀತಿಗೆ ಕೆಲವರು ಕಿಸಕ್ಕನೆ ನಗುತ್ತಾರೆ. ಕೆಲವರು ‘ಅಯ್ಯೋ’ ಎಂದು ಮುಖ ಬೇರೆಡೆಗೆ ಹೊರಳಿಸಿ ಅಸಮಾಧಾನ ವ್ಯಕ್ತಪಡಿಸಿದರೆ ಇನ್ನು ಕೆಲವರು, ‘ಪಾಪ ದೇಹಕ್ಕೆ ತಕ್ಕ ಹಾಗೆ ಧ್ವನಿ ಇರಬಾರದಿತ್ತೇ?’ ಎಂದು ತಾವೇ ಪೇಚಾಡಿಕೊಂಡು ಆ ವ್ಯಕ್ತಿಯ ಬಗ್ಗೆ ಅನುಕಂಪಿತರಾಗುತ್ತಾರೆ. ವೇದಿಕೆಯಲ್ಲಿ ಮಾತನಾಡಲು ಬಂದ ಆ ವ್ಯಕ್ತಿಯ ಬಗೆಗೆ ಸಭಿಕರಲ್ಲಿ ಮೂಡಿದ ಮಾನಸಿಕ ಚಿತ್ರಕ್ಕೆ ಕಾರಣ ಆ ವ್ಯಕ್ತಿಯ ‘ಧ್ವನಿ’; ಗಂಟಲಿನಿಂದ ಹೊರಡುವ ಶಬ್ದದ ಗುಣ. ಇದು ಪ್ರತಿಯೊಬ್ಬ ವ್ಯಕ್ತಿಯ ದೇಹ ಸಂರಚನೆಯನ್ನು ಆಧರಿಸಿ ಇರುತ್ತದೆ ಎನ್ನುವುದನ್ನು ನಾವೆಲ್ಲರೂ ಮೊದಲು ಗ್ರಹಿಸಿದರೆ ಬೇರೆಯವರ ಧ್ವನಿಯ ಬಗ್ಗೆ ನಮ್ಮ ಅಭಿಪ್ರಾಯ ಮೂಡುವುದು ಭಿನ್ನವಾಗುತ್ತದೆ. ಆಗ ಧ್ವನಿಯ ಗುಣಕ್ಕಿಂತಲೂ, ಆ ವ್ಯಕ್ತಿ ಆಡುತ್ತಿರುವ ಮಾತಿನ ‘ಹೂರಣ’ದ ಕುರಿತು ಯೋಚಿಸಲು ಪ್ರಾರಂಭಿಸುತ್ತೇವೆ.
‘ಮುಖ ಮನಸ್ಸಿನ ಕನ್ನಡಿ’ ಎನ್ನುವುದು ಪ್ರಚಲಿತವಾಗಿರುವ ಮಾತು. ಹಾಗೆಯೇ ಸ್ಥೂಲವಾಗಿ ‘ಧ್ವನಿ ವ್ಯಕ್ತಿತ್ವದ ಕನ್ನಡಿ’ ಎಂದೂ ಹೇಳಬಹುದು. ಕೆಲವರು ಈ ಮಾತು ಅತಿಯಾಯ್ತು ಎನ್ನಬಹುದೇನೋ. ಆದರೆ ‘ಮಾತು’ ರೂಪುಗೊಳ್ಳುವಾಗ ಒಂದು ನಿರ್ದಿಷ್ಟ ಸಂದರ್ಭ, ವಿಷಯ, ಅದು ಒಳಗೊಂಡಿರುವ ವ್ಯಕ್ತಿ, ಬಳಸುವ ಭಾಷೆ, ಸಂದರ್ಭದ ಭಾವನಾತ್ಮಕ ತೀವ್ರತೆ, ಆ ಮಾತು ಒಳಗೊಂಡಿರುವ ವ್ಯಕ್ತಿ ವಯಸ್ಸು, ವಿದ್ಯಾಭ್ಯಾಸ, ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಸ್ಥಿತಿ-ಗತಿಗಳು ಇತ್ಯಾದಿ ಹಲವಾರು ಸೂಕ್ಷ್ಮ ವಿಚಾರಗಳು ಹಿನ್ನೆಲೆಯಲ್ಲಿ ಕೆಲಸ ನಿರ್ವಹಿಸಿ, ಮಾತಿನಲ್ಲಿ ಬಳಸಲಾಗುವ ಪದಗಳ ಆಯ್ಕೆ, ವಾಚ್ಯಾರ್ಥ ಮತ್ತು ಧ್ವನ್ಯಾರ್ಥಗಳನ್ನು ಪ್ರಭಾವಿಸುತ್ತವೆ.
ವ್ಯಕ್ತಿಯೊಬ್ಬನ ಮಾನಸಿಕ ಸಂಸ್ಕಾರಕ್ಕೆ ಈ ಎಲ್ಲ ವಿಚಾರಗಳೂ ಕಾರಣವಾಗಿ, ಆತ ಆಡಿದ ಮಾತಿನ ‘ಧ್ವನಿ’ಯಲ್ಲಿ ವ್ಯಕ್ತವಾಗುತ್ತದೆ. ಒರಟು ಧ್ವನಿಯವ ನಮ್ರನಾಗಿ ತೋರಿಕೊಳ್ಳಬಹುದು, ಮೃದುಧ್ವನಿಯವ ಒರಟು ಮಾತುಗಳನ್ನು ಆಡಬಹುದು. ಮಾತೊಂದನ್ನು ಆಡುವಾಗ ಉದ್ದೇಶಿತ ಅರ್ಥವನ್ನು ತರುವ ಪ್ರಕ್ರಿಯೆಯನ್ನೇ ‘ಕಾಕು’ ಎನ್ನುವುದು. ಪದಗಳನ್ನು ಉಚ್ಚರಿಸುವಾಗ ಧ್ವನಿಯ ಏರಿಳಿತಗಳ ಮೂಡುವ ಈ ‘ಕಾಕು’ವೇ ಬಹಳ ಸಂದರ್ಭಗಳಲ್ಲಿ ಸಾಂದರ್ಭಿಕ ಅರ್ಥದ ಜೊತೆಗೆ ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಅವನ ಮಾತಿನ ಮೂಲಕ ಹೊರಗೆಡಹುತ್ತದೆ. ಹೀಗಾಗಿ ‘ಧ್ವನಿಯೇ ವ್ಯಕ್ತಿತ್ವದ ಕನ್ನಡಿ’ ಎನ್ನುವುದು ಸೂಕ್ತವಾಗುತ್ತದೆ. ಇಷ್ಟು ಪ್ರಭಾವಶಾಲಿಯಾಗಿ ಮಾತಿನ ಧ್ವನ್ಯಾರ್ಥವನ್ನು ದೀಪ್ತಗೊಳಿಸುವ ‘ಕಾಕು’ವನ್ನು  ಗ್ರಹಿಸಿ, ನಮ್ಮ ಮಾತಿನಲ್ಲಿ ಅದನ್ನು ಅಳವಡಿಸುವುದೇ ಒಂದು ಕೌಶಲ. ಇದು ಮಾತುಗಾರಿಕೆಯ ಒಂದು ಮುಖ್ಯ ಕೌಶಲವೂ ಹೌದು.
ನಮ್ಮ ಮಾತನ್ನು, ನಾವು ಗಂಟಲಿನಿಂದ ಹೊರಡಿಸುವ ಶಬ್ದಗುಣವನ್ನು ನಮ್ಮ ಮಾತನ್ನು ಕೇಳಿಸಿ ಕೊಳ್ಳುವವರು, ಅವರವರ ಸಾಮರ್ಥ್ಯ ಮತ್ತು ಮಿತಿಗಳನ್ನು ಅವಲಂಬಿಸಿ ಬೇರೆ ಬೇರೆ ರೀತಿಗಳಿಂದ ಗ್ರಹಿಸುತ್ತಾರೆ. ಆದರೆ, ನಮ್ಮ ಧ್ವನಿಯನ್ನು ನಾವೇ ಕೇಳಿಸಿಕೊಂಡಿದ್ದೇವೆಯೇ? ಆ ಕುರಿತು ನಾವೇ ಆಲೋಚನೆ ಮಾಡಿದ್ದೇವೆಯೇ? ನಮ್ಮ ‘ಧ್ವನಿಚಿತ್ರ’ ನಮಗೇ ಹಿತವೆನಿಸುತ್ತದೆಯೇ? - ಇಂಥ ಹಲವಾರು ಪ್ರಶ್ನೆಗಳನ್ನು ಆಸಕ್ತರು ಕೇಳಿಕೊಂಡಲ್ಲಿ ಧ್ವನಿ ಸಂಸ್ಕರಣೆಗೆ ಬೇಕಾದ ಪ್ರೋತ್ಸಾಹಕರ ವಾತಾವರಣವನ್ನು ನಾವೇ ನಿರ್ಮಾಣ ಮಾಡಿಕೊಂಡಂತಾಗುತ್ತದೆ. ಆ ಸಂಬಂಧದ ಪ್ರಶ್ನಾವಳಿ ಹೀಗಿರಬಹುದು:
1.  ಯಾವಾಗಲಾದರೂ ನೀವು ನಿಮ್ಮದೇ ಧ್ವನಿಯ ಬಗ್ಗೆ ಯೋಚಿಸಿದ್ದೀರಾ?
2. ನೀವು ಎಂದಾದರೂ ನಿಮ್ಮ ಮುದ್ರಿತ ಧ್ವನಿಯನ್ನು ಕೇಳಿಸಿಕೊಂಡಿದ್ದೀರಾ? (ಉದಾ: ಟೇಪ್‌ರೆಕಾರ್ಡರ್‌ನಲ್ಲಿ)
3. ನಿಮ್ಮ ಮುದ್ರಿತ ಧ್ವನಿ ಕೇಳಿದಾಗ ನಿಮಗದು ಹಿಡಿಸಿತೇ?
4. ಇತರರು ನಿಮ್ಮ ಧ್ವನಿಯ ಬಗ್ಗೆ ಯಾವಾಗಲಾದರೂ ಆಕ್ಷೇಪಣೆ/ ಅಭಿಪ್ರಾಯ ವ್ಯಕ್ತಪಡಿಸಿದ್ದುಂಟೇ? ಹೌದು ಎಂದಾದರೆ ಅವರ ಅಭಿಪ್ರಾಯವೇನು?
5. ನಿಮ್ಮ ಧ್ವನಿ ನಿಮ್ಮ ಮನಸ್ಸಿನಲ್ಲಿರುವಂತೆ ನಿಮ್ಮ ವ್ಯಕ್ತಿತ್ವದ ಚಿತ್ರಣ ನೀಡುತ್ತದೆಯೆಂದು ನಿಮಗೆ ಅನಿಸುತ್ತದೆಯೇ? (ಗಂಡು, ಹೆಣ್ಣು, ಬುದ್ಧಿವಂತ, ವಿದ್ಯಾವಂತ, ಸ್ನೇಹಪರ ಇತ್ಯಾದಿ ಚಿತ್ರಣಗಳು) ಹೌದು ಅಥವಾ ಇಲ್ಲ ಎನ್ನುವುದಾದರೆ ಯಾವ ರೀತಿಯಾಗಿ?
6. ನಿಮ್ಮ ಸ್ನೇಹಿತರಲ್ಲಿ (ಪುರುಷರು ಮತ್ತು ಸ್ತ್ರೀಯರು), ನಿಮಗೆ ಯಾರದ್ದಾದರೂ ಧ್ವನಿ ಮೆಚ್ಚುಗೆಯಾಗುತ್ತದೆಯೇ? ಹೌದು ಎನ್ನುವುದಾದರೆ ಏಕೆಂದು ವಿವರಿಸಿ:
7. ನಿಮ್ಮ ಸ್ನೇಹಿತರಲ್ಲಿ (ಪುರುಷರು ಮತ್ತು ಸ್ತ್ರೀಯರು), ನಿಮಗೆ ಯಾರದ್ದಾದರೂ ಧ್ವನಿ ಇಷ್ಟವಾಗುವುದಿಲ್ಲವೇ? ಹೌದು ಎನ್ನುವುದಾದರೆ ಏಕೆಂದು ವಿವರಿಸಿ.
8. ನಿಮ್ಮ ಧ್ವನಿ ನಿಮ್ಮ ಕುಟುಂಬದ ಯಾವುದಾದರೂ ಸದಸ್ಯರ ಧ್ವನಿಯೊಂದಿಗೆ ಹೋಲುತ್ತದೆಯೇ? ಹೌದಾದರೆ ವಿವರಿಸಿ.
9. ಈ ಕೆಳಗಿನ ಯಾವ ಪದಗಳು ನಿಮ್ಮ ಮಾತಿನ ಧ್ವನಿಯ ಗುಣವನ್ನು ವಿವರಿಸಬಲ್ಲವೋ ಅವುಗಳನ್ನು ಗುರುತಿಸಿಕೊಳ್ಳಿ (ಸಾಮಾನ್ಯವಾಗಿ ಮಾತನಾಡುವ ಸಂದರ್ಭ - ಮುಖಾಮುಖಿ ಅಥವಾ ಮುದ್ರಿತ ಧ್ವನಿ). ಇವುಗಳನ್ನು ಹೊರತುಪಡಿಸಿ ಬೇರಾವುದಾದರೂ ವಿವರಣೆಗಳಿದ್ದರೆ ಅವನ್ನೂ ನೀಡಿ
ಸುಖಕರ ಧ್ವನಿ/ ಮಾದಕ ಧ್ವನಿ/ ಮರಳಿನಂಥ ಧ್ವನಿ/ ಗೊಗ್ಗರು ಧ್ವನಿ/ ಒರಟು ಧ್ವನಿ//ತೆಳ್ಳನೆಯ ಧ್ವನಿ/ ಚೀರುವ ಧ್ವನಿ / ಕೀರಲು ಧ್ವನಿ/ ಏಕಶೃತಿ (ಏರಿಳಿತಗಳಿಲ್ಲದ)/ ಅನುನಾಸಿಕ ಧ್ವನಿ(ಮೂಗಿನ) ಅಸ್ಪಷ್ಟ ಧ್ವನಿ/ ಕುಸುಕಲು ಧ್ವನಿ/ ಅತಿ ಮೃದು ಧ್ವನಿ/ ಹೆಚ್ಚು ಶ್ರುತಿಯ ಧ್ವನಿ/ ತಗ್ಗು ಶ್ರುತಿಯ ಧ್ವನಿ/ ಅತಿ ವೇಗದ ಧ್ವನಿ/ ದುರ್ಬಲ ಧ್ವನಿ/ ಸ್ಪಷ್ಟ ಧ್ವನಿ/ ಏದುಸಿರಿನ ಧ್ವನಿ/ ಅತಿ ದೊಡ್ಡ ಧ್ವನಿ/ ಗಟ್ಟಿ ಧ್ವನಿ ಗೋಳಿನ ಧ್ವನಿ/ ಆಸಕ್ತಿ ಮೂಡಿಸುವ ಧ್ವನಿ/ಅನುರಣಿಸುವಂಥ ಧ್ವನಿ /ಗಂಡು ಧ್ವನಿ/ ಹೆಣ್ಣು ಧ್ವನಿ/ ಅಭಿವ್ಯಕ್ತಿಪೂರ್ಣ ಧ್ವನಿ/ ಸಾಧಾರಣ ಧ್ವನಿ
ಅಬ್ಬಾ ! ಪ್ರತಿನಿತ್ಯ ನಾವಾಡುವ ಮಾತಿಗೆ ಇಷ್ಟೊಂದು ಧ್ವನಿ ವೈವಿಧ್ಯವಿದೆಯೇ? - ಎಂದು ಅಚ್ಚರಿಪಡುವಂತಾಗುತ್ತದೆಯಲ್ಲವೇ? ನಿಜ, ವ್ಯಕ್ತಿಯಿಂದ ವ್ಯಕ್ತಿಗೆ ಈ ಗುಣಗಳು ಬದಲಾಗುತ್ತವೆ. ಮೇಲಿನ ಗುಣದೋಷಗಳ ಮಿಶ್ರಣದಿಂದಾಗಿ ಪ್ರತಿಯೊಬ್ಬ ವ್ಯಕ್ತಿಯ ಧ್ವನಿಯೂ ಅತ್ಯಂತ ಅನನ್ಯವಾಗಿರುತ್ತದೆ. ದೋಷಗಳೇ ಇಲ್ಲದ ಧ್ವನಿ ಇದೆಯೇ ಎಂದರೆ ಇಲ್ಲ ಎಂದೇ ಹೇಳಬೇಕು. ಆದರೆ, ಇರುವ ದೋಷಗಳನ್ನು ತಕ್ಕಮಟ್ಟಿಗೆ ನೀಗಿಕೊಂಡು ಉತ್ತಮ ಧ್ವನಿಯನ್ನು ರೂಪಿಸಿಕೊಳ್ಳಲು ಪರಿಶ್ರಮ ಬೇಕು. ನುರಿತ ತಜ್ಞರ ತರಬೇತಿಯೂ ಅತಿ ಅಗತ್ಯ. ಮೇಲಿನ ಗುಣದೋಷಗಳು ವ್ಯಕ್ತಿಯ ದೈಹಿಕ ಸಂರಚನೆಯ ವಿಶೇಷತೆಗಳಿಂದ ಉಂಟಾಗುತ್ತವೆ ಆದ್ದರಿಂದ, ಒಂದು ಮಿತಿಯಲ್ಲಿ ಮಾತ್ರ ದೋಷಗಳನ್ನು ಸರಿಪಡಿಸಿಕೊಂಡು ಗುಣಗಳನ್ನು ವೃದ್ಧಿಸಿಕೊಳ್ಳಬಹುದು. ಈ ಮಿತಿಯ ಬಗ್ಗೆ ಅರಿವು ಹೊಂದಿರಲೇಬೇಕಾದದ್ದು ಅತ್ಯಗತ್ಯ.

(ಕೃಪೆ : ಪ್ರಜಾವಾಣಿ)
ನುಡಿ ನಿದಾನ ಸರಣಿ 1

ಶ್..! ಇದು ‘ಮಾತು’ ಕತೆ

ಯಾವುದೇ ವೃತ್ತಿಯಲ್ಲಿ ತೊಡಗಿಕೊಳ್ಳ ಬಯಸುವ ಯುವಕ/ಯುವತಿಯರಿಗೆ ಅಗತ್ಯವಾಗಿ ಇರಲೇಬೇಕಾದ ಕೌಶಲವೆಂದರೆ ಮಾತುಗಾರಿಕೆ. ವ್ಯವಹಾರವೊಂದರಲ್ಲಿ ಇಬ್ಬರು ವ್ಯಕ್ತಿಗಳ ನಡುವಣ ಸಂವಹನವೇ ಮುಖ್ಯ.
ಸಂವಹನ ಸರಿಯಾಗಿ ಆದಾಗಲಷ್ಟೇ ವ್ಯವಹಾರವೂ ಸುಗಮವಾಗಿ ಆಗುವುದು. ಸಂವಹನ ಸರಿಯಾಗಿ ಆಗುವುದು ಎಂದರೇನು? ’ಹೇಳುವ’ ವ್ಯಕ್ತಿಯ ಮಾತಿನ ಸಂಪೂರ್ಣ ಉದ್ದೇಶಿತ ಅರ್ಥ, ಭಾವ ಮತ್ತು ಧ್ವನಿ ’ಕೇಳುವ’ವನಿಗೆ ಆಗಬೇಕು.
ಉದ್ದೇಶ ಹೇಳುವವನದ್ದಾಗಿದ್ದು ಅದು ಸಂದರ್ಭಕ್ಕನುಗುಣವಾಗಿ ಇರುತ್ತದೆ. ಹೇಳುವವನ ಮಾತುಗಳನ್ನು ಕೇಳಿ ಅದನ್ನು ಅರ್ಥಮಾಡಿಕೊಳ್ಳಬೇಕೆನ್ನುವ ಅಗತ್ಯ ಮತ್ತು ವ್ಯವಧಾನಗಳು ಕೇಳುವವನಿಗೆ ಇದ್ದಾಗಲಷ್ಟೇ, ಹೇಳುವವನು ಹೇಳಿದ್ದು, ಕೇಳುವವನು ಕೇಳಿಸಿಕೊಂಡಿದ್ದು  - ಎರಡೂ ಒಂದೇ ಆಗುತ್ತದೆ. ಸಂವಹನದ ಪ್ರಕ್ರಿಯೆ ಸಂಪೂರ್ಣವಾಗುತ್ತದೆ. ಹೇಳುವವನು ಹೇಳಿದ್ದನ್ನೆಲ್ಲ ಕೇಳುವವನು ಕೇಳಿಸಿಕೊಂಡಿದ್ದರೂ, ತಾನು ಕೇಳಿಸಿಕೊಂಡ ಭಾಷೆಯೇ ತಿಳಿಯದೆ ಹೋದರೆ ಅರ್ಥ ಗ್ರಹಿಸುವುದು ಹೇಗೆ?
ಈ ಹಿನ್ನೆಲೆಯಲ್ಲಿ ನೋಡಿದಾಗ ’ಮಾತು’ ಎನ್ನುವುದು ಒಂದು ಸಂಕೀರ್ಣ ಪ್ರಕ್ರಿಯೆ ಎನ್ನಬಹುದು. ಒಂದು ’ಮಾತು’ ರೂಪುಗೊಳ್ಳುವುದರ ಹಿನ್ನೆಲೆಗೆ ಒಂದು ಸಂದರ್ಭ, ಅದನ್ನು ವಿವರಿಸಬೇಕಾದ ಅಗತ್ಯ, ವಿವರಿಸಲು ಬಳಸಲಾಗುವ ಭಾಷೆ, ಹೇಳುವವನ ಭಾವತೀವ್ರತೆ ಮತ್ತು ಹೇಳಲ್ಪಡುವ ಮಾತಿನ ಉದ್ದೇಶಿತ ಧ್ವನಿ - ಇವಿಷ್ಟು ಕಾರ್ಯ ನಿರ್ವಹಿಸುತ್ತವೆ. ಮಾತುಗಾರಿಕೆಯೆನ್ನುವುದು ಇಷ್ಟು ಸಂಕೀರ್ಣವಾದ ವಿಚಾರವಾಗಿರುವುದರಿಂದಲೇ ಔದ್ಯಮಿಕ / ಮಾಧ್ಯಮ ಕ್ಷೇತ್ರದಲ್ಲಿ ಅದನ್ನೊಂದು ’ಕೌಶಲ’ ಎಂದು ಗುರುತಿಸಿದ್ದಾರೆ. ಅದಕ್ಕೊಂದು ತರಬೇತಿಯ ಅಗತ್ಯವನ್ನೂ ಕಂಡುಕೊಂಡಿದ್ದಾರೆ.
೨೦೦೦ ಇಸವಿಯ ನಂತರದ ದಿನಗಳಲ್ಲಿ ಮೂಡಿಬಂದ ತಂತ್ರಜ್ಞಾನ ಕ್ರಾಂತಿಯ ಕಾರಣ ಖಾಸಗಿ ಎಫ್.ಎಂ ರೇಡಿಯೋಗಳು/ ಟೆಲಿವಿಷನ್ ವಾಹಿನಿಗಳು ಸಾರ್ವಜನಿಕ ಜೀವನವನ್ನು ದೊಡ್ಡದಾಗಿ ಪ್ರಭಾವಿಸಿದವು. ಯುವಜನರ ಮಾಧ್ಯಮ ಎಂದು ಬಿಂಬಿತವಾಗಿ ಮೂಡಿಬಂದ ಖಾಸಗಿ ಎಫ್.ಎಂ ವಾಹಿನಿಗಳಲ್ಲಿ, ಕೇವಲ ಮನರಂಜನೆಯನ್ನಷ್ಟೇ ಗಮನದಲ್ಲಿಟ್ಟುಕೊಂಡ, ಹ್ರಸ್ವಗೊಳಿಸಲ್ಪಟ್ಟ ಆಡುನುಡಿಯ ಬಳಕೆ, ಅತ್ಯಂತ ಸಹಜ ಎಂಬಂತೆ ಬಿಂಬಿತವಾದ ಭಾಷಾ ಸ್ಖಾಲಿತ್ಯ ಮತ್ತು ಉಚ್ಚಾರಣಾ ಸ್ಖಾಲಿತ್ಯಗಳು, ವಿವಿಧ ಭಾಷೆಗಳನ್ನು ಬೆರೆಸಿ ಮೂಡಿಸುವ ಅರ್ಥ-ಭಾವಗಳು,- ಇವೆಲ್ಲ ತತ್‌ಕ್ಷಣಕ್ಕೆ ರೋಚಕವೆನ್ನಿಸಿದವು.
ಬಾನುಲಿಯ ಭಾಷೆ ಎಂದರೆ ಎಫ್.ಎಂ ವಾಹಿನಿಗಳ ಭಾಷೆ ಎಂದೇ ಜನ ಭ್ರಮಿತರಾದರು. ದಿನಕಳೆದಂತೆ ಈ ಭ್ರಮೆ ಕಳಚುತ್ತಿದೆ. ಆಡುನುಡಿಯ ಕನ್ನಡ ವಿರೂಪಗೊಂಡಿರುವುದನ್ನು ಕೇಳುಗರೇ ಪ್ರಶ್ನಿಸುತ್ತಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಇಂತಹ ಒಂದು ಸಂದಿಗ್ಧ ಸ್ಥಿತಿಗೆ ಕನ್ನಡ ಭಾಷೆ ಬಂದು ನಿಲ್ಲಲು ಕಾರಣ ನಿರೂಪಕರ (ಆರ್.ಜೆ / ವಿ.ಜೆ ಗಳ) ಭಾಷಾ ಸಾಮರ್ಥ್ಯದ ಪರಿಮಿತಿ ಮತ್ತು ಮಾತಿನ ಸಮಗ್ರ ಸ್ವರೂಪವನ್ನು ಅರ್ಥ ಮಾಡಿಕೊಳ್ಳದೆ ಪ್ರಯೋಗಕ್ಕೆ ತೊಡಗುವುದರಿಂದಾದ ದುಸ್ಥಿತಿ.
ಖಾಸಗಿ ರೇಡಿಯೋ ಮತ್ತು ಟಿವಿ ವಾಹಿನಿಗಳು ಪ್ರಾರಂಭವಾಗುವುದಕ್ಕೂ ಮೊದಲೇ ಇದ್ದ ಸಾರ್ವಜನಿಕ ಸೇವಾ ಪ್ರಸಾರ ಮಾಧ್ಯಮವಾದ ಆಕಾಶವಾಣಿ ಹಾಗೂ ದೂರದರ್ಶನಗಳು ಆ ಹೊತ್ತಿಗಾಗಲೇ ಎರಡೂ ಮಾಧ್ಯಮಗಳಲ್ಲಿನ ಮಾತಿನ ಸ್ವರೂಪವನ್ನು, ಔಚಿತ್ಯವನ್ನು ಮತ್ತು ಪರಿಮಾಣಗಳನ್ನು ನಿಖರವಾಗಿ ನಿರ್ದೇಶಿಸಿದ್ದವು. ಹೊಸತಾಗಿ ಮೂಡಿಬಂದ ಖಾಸಗಿವಾಹಿನಿಗಳು ನೀಡಿದ ನವೀನ ಅನುಭವದಲ್ಲಿ ಕೇಳುಗರು ತೇಲಿಹೋಗಿದ್ದಂತೂ ನಿಜ.
ಅದಕ್ಕಿಂತಲೂ ಮುಖ್ಯವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳಾದ ರೇಡಿಯೋ ಮತ್ತು ಟೆಲಿವಿಷನ್‌ಗಳು ತೆರೆದಿಟ್ಟ ನಿರೂಪಕರ ಉದ್ಯೋಗಾವಕಾಶಗಳು ಜನಸಾಮಾನ್ಯರಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸಿದವು. ಆದರೆ, ಆ ವೃತ್ತಿಯನ್ನು ನಿರ್ವಹಿಸುವಂಥ ಅಗತ್ಯಗಳಿಗೆ ತಕ್ಕಂತೆ ಆ ಹೊತ್ತಿಗೆ ಯಾವ ಕ್ರಮಬದ್ಧ ತರಬೇತಿಯೂ ಲಭ್ಯವಿರಲಿಲ್ಲ. ಉದ್ಯೋಗಾರ್ಥಿಗಳ ವೈಯಕ್ತಿಕ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಗಮನಿಸಿಯೇ ವಿವಿಧ ವಾಹಿನಿಗಳಲ್ಲಿ ಆಯ್ಕೆಗಳಾದವು. ಅರಳು ಹುರಿದಂತೆ ಮಾತನಾಡಬಲ್ಲವರೆಲ್ಲರೂ ನಿರೂಪಕರಾಗಬಹುದೆಂಬ ಭ್ರಮೆ ದಟ್ಟವಾಯಿತು.
ಖಾಸಗಿ ವಾಹಿನಿಗಳೆಲ್ಲವೂ ಪ್ರಸಾರವನ್ನು ಒಂದು ಲಾಭದಾಯಕ ಉದ್ಯಮದ ಸ್ವರೂಪದಲ್ಲೇ ಗ್ರಹಿಸಿದ್ದುದರಿಂದ ಪರಸ್ಪರ ಸ್ಪರ್ಧೆಗಿಳಿದು ವೈಯಕ್ತಿಕ ಛಾಪು ಮೂಡಿಸುವ ಸಲುವಾಗಿ ಭಾಷಾ ಬಳಕೆಯ ವಿಧಾನವನ್ನೇ ಒಂದು ಸಾಧನವನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದವು. ರೇಡಿಯೋ ಹಾಗೂ ಟೆಲಿವಿಷನ್‌ಗಳಲ್ಲಿ ಅದುವರೆವಿಗೂ ಕೇಳಿಬರದಿದ್ದ ಹೊಸ ನಮೂನೆಯ ಪದಗಳು, ಧ್ವನಿಗಳು ಸೃಷ್ಟಿಯಾಗಿ ಅವು ಕನ್ನಡ ಭಾಷೆಯದ್ದೇ ಆಗಿಯೂಬಿಟ್ಟವು.
ಪ್ರಸ್ತುತ ಈ ಲೇಖನಮಾಲೆಯ ಉದ್ದೇಶ, ಖಾಸಗಿವಾಹಿನಿಗಳಲ್ಲಿನ ಭಾಷಾ ಬಳಕೆಯನ್ನು ಟೀಕಿಸುವುದಲ್ಲ. ಹಾಗೆ ಅದನ್ನು ಟೀಕಿಸಲೂ ಆಗುವುದಿಲ್ಲ. ಯಾವುದೇ ವಾಹಿನಿಯ ಅಗತ್ಯಗಳು ಮತ್ತು ಅಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲಗಳಿಗೆ ಅನುಸಾರವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅನಿವಾರ್ಯತೆಯಿರುವುದರಿಂದ, ಪ್ರತಿಯೊಂದು ವಾಹಿನಿಯದ್ದೂ ತನ್ನದೇ ಆದ ವಿಶಿಷ್ಟ ’ಧ್ವನಿ’ ರೂಪುಗೊಳ್ಳುತ್ತದೆ. ಆದ್ದರಿಂದಲೇ ಎಲ್ಲ ವಾಹಿನಿಗಳೂ ವಿಭಿನ್ನವಾಗಿಯೇ ಕೇಳಿಸುತ್ತವೆ.
’ಮಾತು’, ಎಲೆಕ್ಟ್ರಾನಿಕ್ ಮಾಧ್ಯಮಗಳಾದ ರೇಡಿಯೋ ಮತ್ತು ಟೆಲಿವಿಷನ್‌ಗಳಲ್ಲಿ ಕಲಾತ್ಮಕತೆಯನ್ನು ತರಬೇಕಾದರೆ ಬೇಕಾಗುವ ಜೀವದ್ರವ್ಯ. ರೇಡಿಯೋದಲ್ಲಂತೂ ಬರೀ ಮಾತು ಹಾಗೂ ಶಬ್ದ. ಟೆಲಿವಿಷನ್‌ನಲ್ಲಿ ದೃಶ್ಯಕ್ಕೆ ಪೂರಕವಾಗಿ ಮಾತ್ರ ಮಾತು ಬೇಕಾದೀತು. ಈ ದೃಷ್ಟಿಯಿಂದ, ಮಾಧ್ಯಮಗಳಲ್ಲಿ ಮಾತು ಅತ್ಯಂತ ಸೃಜನಾತ್ಮಕವಾದ ಪಾತ್ರವನ್ನು ವಹಿಸುತ್ತದೆ. ಆದ್ದರಿಂದಲೇ ಅಲ್ಲಿ ಮಾತು, ಕಲೆಯಾಗುತ್ತದೆ, ಒಂದು ಅಗತ್ಯ ಕೌಶಲವಾಗುತ್ತದೆ, ವೃತ್ತಿಪರತೆಯ ಸೂಚಕವಾಗುತ್ತದೆ.
ಅತಿಯಾಗಿ ಮಾತನಾಡುವವರನ್ನು ’ವಾಚಾಳಿ’ ಎಂದು ಗುರುತಿಸುತ್ತೇವೆ. ಮಿತವಾಗಿ ಮಾತನಾಡುವವರನ್ನು ’ಮೌನಿ’ ಎನ್ನುತ್ತೇವೆ. ಈ ಎರಡು ಧ್ರುವಗಳ ನಡುವಿನ ಒಂದು ಹದವನ್ನು ಕಂಡುಕೊಳ್ಳುವುದೇ ಪ್ರತಿಯೊಬ್ಬರೂ ಸಾಧಿಸಬೇಕಾಗಿರುವ ಕೌಶಲ. ಧ್ವನಿ ಹೊರಡಿಸಲು ಬಲ್ಲವರೆಲ್ಲರೂ ಹೇಗೆ ಸಂಗೀತಗಾರರಾಗಲು ಸಾಧ್ಯವಿಲ್ಲವೋ ಹಾಗೆ ಭಾಷೆ ತಿಳಿದವರೆಲ್ಲ ಮಾತುಗಾರರಾಗಲು ಆಗುವುದಿಲ್ಲ. ಎಲ್ಲಕ್ಕೂ ಪ್ರಯತ್ನ, ಸಾಧನೆ, ಅನುಕೂಲಗಳು ಇರಬೇಕು.
ಮಾತುಗಾರಿಕೆಯನ್ನೇ ವೃತ್ತಿಯಾಗಿ ಬಳಸಿಕೊಳ್ಳಬಯಸುವ ಉತ್ಸಾಹಿಗಳಿಗೆ ಮತ್ತು ತಮ್ಮ ವೃತ್ತಿಯಲ್ಲಿ ಆಗಿಂದಾಗ್ಗೆ ಮಾತುಗಾರಿಕೆಯ ಅಗತ್ಯವಿರುವವರಿಗೆ, ಮಾತನಾಡುವಾಗ ಪ್ರಯುಕ್ತವಾಗುವ ಶಬ್ದೋಚ್ಚಾರ, ಧ್ವನಿ, ಅದರ ಸಂಸ್ಕರಣೆ ಮೊದಲಾದ ಮೂಲಭೂತವಾದ ವೃತ್ತಿಪರ ಮಾಹಿತಿಗಳನ್ನು ನೀಡುವುದು ಪ್ರಸ್ತುತ ಮಾಲಿಕೆಯ ಉದ್ದೇಶ.
ಆಡುತ್ತ ಆಡುತ್ತ ಮಾತು ಸ್ಫುಟವಾಗುತ್ತದೆ. ಹಾಗೆ ಮಾತನಾಡುವಾಗ ಕೇವಲ ಶಬ್ದೋಚ್ಚಾರದ ಜೊತೆಗೆ ಪದ, ವಾಕ್ಯ ಮತ್ತು ಅರ್ಥಗಳೂ ಅಲ್ಲದೆ ವಾಚ್ಯಾರ್ಥವನ್ನು ಮೀರಿದ ’ಧ್ವನಿ’ಯೂ ಸ್ಫುಟವಾಗಲು ನಮ್ಮ ಶಬ್ದೋತ್ಪತ್ತಿಯ ಅಂಗಗಳಾದ ಧ್ವನಿಪೆಟ್ಟಿಗೆ, ಶ್ವಾಸಕೋಶ, ವಪೆ, ಮೂಗು, ಬಾಯಿ, ಹಲ್ಲು, ತುಟಿ, ನಾಲಗೆಗಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದಕ್ಕೆ ವಿಶೇಷವಾದ ಗಮನ ನೀಡಬೇಕಾಗುತ್ತದೆ. ನಿರಂತರ ಅಭ್ಯಾಸಕ್ರಮದಿಂದ ಅವುಗಳನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.

(ಕೃಪೆ : ಪ್ರಜಾವಾಣಿ )

Thursday, October 25, 2007

Hexamorse - a new concept in Morching

Morching Tarang
This is an innovative performance on morching by Vid. Bharadwaj.R.Sathavalli of Bangalore. Bharadwaj renders a composition using Hexamorse, an instrument consisting of arrangement of 6 morchings. The hexamorse is conceptualised and designed by me. Performed at Gokhle Institute under the aegis of Percussive Arts Centre.

view this at http://www.cliparound.com/tag/Bharadwaj

Friday, July 27, 2007

Towards Quantification of Emotions

Art experience, which is subjective by nature, however doesn’t prohibit objective approaches to the ‘raga-rasa’ relation in Indian Music. The thought that the ‘rasa’ (the aesthetic taste) is inherent to a “Raga” is the main premise on which raga-s are termed emotive and in the sense that they evoke a definite ‘rasa’. This very premise needs to be revalidated scientifically. The autonomy of ‘musical stimulus’ evoking ‘desired’ responses in human subjects is often accepted by consensus.

The impact and the resultant response to music by human subjects are broadly categorized into two types namely, Affective Response and Aesthetic Response (Lundin, 1967). Of the two, affective response to music is objective by nature, for ‘the musical stimulus creates a definite change in the organism’ (Lundin, 1967). The convenience of having sufficient scientific equipments for the measurement of the affective responses is the main motivation to take up the scientific study of the nature of response to music.

Notwithstanding the traditional claims about the ‘raga-rasa’ relation in Indian Music, sufficient objective studies have not been carried out till date to prove this fact experimentally. However, drawing analogies from the studies done in western music, we may, for the present, make a beginning in this direction. My primary area of inquiry is the objective study of emotions in pure music only there by avoiding the influence of ‘text’ in eliciting the ‘context’ and in turn the ‘rasa’.
Indian Classical Music, which boasts of employing the concept of ‘raga-rasa’ relation and exploiting it ‘effectively’ during performance, has failed to stand up to this claim (more so in the south Indian musical tradition) as the ‘text’ always has gained prominence over the ‘melody’. The failure is as a result of lack of standardized connotation for the ‘melodic’ part that could be realized practically during performances. Scholars put forth differing views regarding a sort of (organic?) relation between melody and text. The affective component of the aesthetic taste, by default, is measurable. A serious and well-structured research is going on in the west in this area. One Basic problem is to model the affect.

‘There is no definitive model of emotions. Psychologists have been debating for years how to define them. The pattern recognition problem consists of sorting observed data into a set of states (classes or categories), which correspond to several distinct (but possibly overlapping, or "fuzzy") emotional states. Which tools are most suitable to accomplish this depends on the nature of the signals observed’. This almost is in agreement with Bharatha’s dictum that ‘Rasa is the cumulative effect of Vibhāva (stimulus), Anubhāva (involuntary action) and Vyabhichāri bhāva (Voluntary reaction) ’. Researchers have observed that the involuntary actions during the affected state are definitely measurable and those measurements represent the emotional correlates.

With this, we need to question ourselves after every repeated listening of a particular musical item as to whether the listening was the same? Or, was it different? Why so? What was the new dimension that we got to relish? If so, why we didn’t get to that dimension earlier? The answers to these questions would explain why live concerts are said to be more relishable than listening to cassettes.

The effect of impact of a stone hitting a person depends on its inherent mass and the force with which it hits him. The concept of Rasamsha was developed analogous to this thought. It is reinforced by means of GSR Studies. The next step is to develop a structured research plan based on ‘Raga profile’, which further would lead to evolution of design techniques in music therapy.

The ‘Raga-rasa’ relation needs to be revalidated as to make sense and more practicable in the present context of Indian Music.